ಮಗನ ಸೋಲು ಕುಮಾರಸ್ವಾಮಿಯನ್ನು ಫ್ರಸ್ಟ್ರೇಷನ್​ಗೆ ನೂಕಿದೆ, ಹಾಗಾಗೇ ಸುಳ್ಳು ಆರೋಪಗಳು: ಕೃಷ್ಣ ಭೈರೇಗೌಡ, ಸಚಿವ

ಚಿಕ್ಕಬಳ್ಳಾಪುರ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ಪುನಃ ಶುರುವಾಗಿದೆ. ಇವತ್ತು ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಭೈರೇಗೌಡ, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮಗನ ಸೋಲಿನ ನಂತರ ಕುಮಾರಸ್ವಾಮಿ ಫ್ರಸ್ಟೇಟ್ ಆಗಿದ್ದಾರೆ, ಅವರಿಗೆ ಬಿಜೆಪಿಯರಿಂದಲೇ ಮೋಸವಾಗಿದೆ, ಯಾಕೆಂದರೆ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಬ್ಯರ್ಥಿಯಾಗಿ ಸ್ಪರ್ಧಿಸಿ ಕುಮಾರಸ್ವಾಮಿ ಗಳಿಸದ ವೋಟುಗಳಿಗಿಂತ 12 ಸಾವಿರ ಮತಗಳನ್ನು ಅವರ ಮಗ ಕಮ್ಮಿ ಪಡೆದಿದ್ದಾರೆ. ಎನ್​ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿಯಿಂದ ಮೋಸವಾಗಿರೋದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಚಿವ ಹೇಳಿದರು. 

Share this:

CONVERSATION